Telegram Join My Telegram   WhatsApp Join My WhatsApp

SBI Clerk Notification 2026: ಎಸ್‌ಬಿಐನಲ್ಲಿ 9,766 ಹುದ್ದೆಗಳು! ಕನ್ನಡಿಗರಿಗೆ ಭರ್ಜರಿ ಹುದ್ದೆಗಳು – ಪರೀಕ್ಷಾ ಮಾದರಿ, ಪಠ್ಯಕ್ರಮ ಮತ್ತು ಅರ್ಜಿ ವಿವರ ಇಲ್ಲಿದೆ.

SBI Clerk Notification 2026: 9,766 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಬೃಹತ್ ಅಧಿಸೂಚನೆ ಪ್ರಕಟ! ಪೂರ್ಣ ವಿವರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುರಕ್ಷಿತ, ಪ್ರಷ್ಠಿತ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಅತ್ಯುತ್ತಮ ಅವಕಾಶವನ್ನು ತಂದಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ, 2026ನೇ ಸಾಲಿನ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಅರ್ಥಾತ್ ಕ್ಲರ್ಕ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಒಟ್ಟು 9,766 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಪದವಿ ಪೂರ್ಣಗೊಳಿಸಿದ ಯುವಕ-ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೂ ಸಹ ನೂರಾರು ಹುದ್ದೆಗಳು ಮೀಸಲಾಗಿದ್ದು, ಸ್ಥಳೀಯ ಭಾಷೆ (ಕನ್ನಡ) ತಿಳಿದಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.

ಈ ಲೇಖನದಲ್ಲಿ SBI ಕ್ಲರ್ಕ್ 2026 ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಮಾದರಿ , ಪಠ್ಯಕ್ರಮ , ಸಂಬಳದ ವಿವರ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ವಿವರವಾಗಿ ನೀಡಲಾಗಿದೆ.

೧. ಹುದ್ದೆಗಳ ವಿವರ ಮತ್ತು ವರ್ಗೀಕರಣ 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಾರಿ ದಾಖಲೆ ಮಟ್ಟದ ಹುದ್ದೆಗಳನ್ನು ಪ್ರಕಟಿಸಿದೆ. ಖಾಯಂ ಹುದ್ದೆಗಳ ಜೊತೆಗೆ ಕಳೆದ ವರ್ಷಗಳ ಬ್ಯಾಕ್‌ಲಾಗ್ ಹುದ್ದೆಗಳನ್ನು ಸೇರಿಸಿ ನೇಮಕಾತಿ ನಡೆಸಲಾಗುತ್ತಿದೆ.

ಸಂಸ್ಥೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 

ಹುದ್ದೆಯ ಹೆಸರು: ಜೂನಿಯರ್ ಅಸೋಸಿಯೇಟ್ 

ಒಟ್ಟು ಖಾಲಿ ಹುದ್ದೆಗಳು: 9,766

ನಿಯಮಿತ ಹುದ್ದೆಗಳು : 7,680

ಬ್ಯಾಕ್‌ಲಾಗ್ ಹುದ್ದೆಗಳು : 2,086

ಕರ್ನಾಟಕ ವೃತ್ತದ ಹುದ್ದೆಗಳು: 760ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ.

ಪ್ರಮುಖ ಟಿಪ್ಪಣಿ: ಅಭ್ಯರ್ಥಿಗಳು ಯಾವುದಾದರೂ ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನೀವು ಕರ್ನಾಟಕ ರಾಜ್ಯದಿಂದ ಅರ್ಜಿ ಸಲ್ಲಿಸುತ್ತಿದ್ದರೆ, ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

೨. ಅರ್ಹತಾ ಮಾನದಂಡಗಳು

SBI ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ:

ಅ) ಶೈಕ್ಷಣಿಕ ಅರ್ಹತೆ 

ಅಭ್ಯರ್ಥಿಯು ಭಾರತದಲ್ಲಿ ಕಾನೂನುಬದ್ಧವಾಗಿ ಸ್ಥಾಪಿತಗೊಂಡ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.

ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ: ತಮ್ಮ ಪದವಿಯ ಅಂತಿಮ ವರ್ಷ ಅಥವಾ ಅಂತಿಮ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಆದರೆ, ದಾಖಲೆ ಪರಿಶೀಲನೆ ವೇಳೆ ಅಥವಾ ನಿಗದಿತ ದಿನಾಂಕದ ಒಳಗೆ ಪದವಿ ಪಾಸಾಗಿರುವ ಅಂಕಪಟ್ಟಿ/ಪ್ರಮಾಣಪತ್ರವನ್ನು ಒದಗಿಸುವುದು ಕಡ್ಡಾಯವಾಗಿದೆ.

ಆ) ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:

ಕನಿಷ್ಠ ವಯಸ್ಸು: 20 ವರ್ಷಗಳು

ಗರಿಷ್ಠ ವಯಸ್ಸು: 28 ವರ್ಷಗಳು

ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ :

ವಿವಿಧ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ:

OBC (ಹಿಂದುಳಿದ ವರ್ಗಗಳು): 3 ವರ್ಷಗಳು (ಗರಿಷ್ಠ 31 ವರ್ಷ)

SC / ST (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ): 5 ವರ್ಷಗಳು (ಗರಿಷ್ಠ 33 ವರ್ಷ)

PwBD (ಅಂಗವಿಕಲ ಅಭ್ಯರ್ಥಿಗಳು – General/EWS): 10 ವರ್ಷಗಳು

PwBD (OBC): 13 ವರ್ಷಗಳು

PwBD (SC/ST): 15 ವರ್ಷಗಳು

ಮಾಜಿ ಸೈನಿಕರು : ಸೇವಾ ಅವಧಿಗೆ ಅನುಗುಣವಾಗಿ ನಿಯಮಾನುಸಾರ ಸಡಿಲಿಕೆ.

೩. ವೇತನ ಶ್ರೇಣಿ ಮತ್ತು ಭತ್ಯೆಗಳು

SBI ಜೂನಿಯರ್ ಅಸೋಸಿಯೇಟ್ ಹುದ್ದೆಯು ಅತ್ಯುತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.

ಮೂಲ ವೇತನ : ₹19,900/- (ಆರಂಭಿಕ 2 ಮುಂಗಡ ಬಡ್ತಿಗಳೊಂದಿಗೆ).

ಆರಂಭಿಕ ಮಾಸಿಕ ಒಟ್ಟು ವೇತನ: ಬೆಂಗಳೂರು ಅಥವಾ ಮೆಟ್ರೋ ನಗರಗಳಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ವೇತನ ಸುಮಾರು ₹37,000 ರಿಂದ ₹45,000 ವರೆಗೆ ಇರಲಿದೆ.

ಇತರ ಸೌಲಭ್ಯಗಳು ಮತ್ತು ಭತ್ಯೆಗಳು:

ಡಿಎ (ತುಟ್ಟಿಭತ್ಯೆ)

ಹೆಚ್‌ಆರ್‌ಎ (ಮನೆ ಬಾಡಿಗೆ ಭತ್ಯೆ)

ಸಾರಿಗೆ ಭತ್ಯೆ

ವೈದ್ಯಕೀಯ ವಿಮೆ ಹಾಗೂ ಸೌಲಭ್ಯಗಳು

ನ್ಯೂ ಪಿಂಚಣಿ ಯೋಜನೆ ಮತ್ತು ಗ್ರಾಚ್ಯುಟಿ

ಪತ್ರಿಕೆ, ಪೆಟ್ರೋಲ್, ಕ್ಲೀನಿಂಗ್ ಭತ್ಯೆಗಳು

೪. ಆಯ್ಕೆ ಪ್ರಕ್ರಿಯೆ 

SBI ಕ್ಲರ್ಕ್ ಹುದ್ದೆಯ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಆಯ್ಕೆಯು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮೇಲೆ ಆಧಾರಿತವಾಗಿರುತ್ತದೆ.

ಆಯ್ಕೆ ಪ್ರಕ್ರಿಯೆಯನ್ನು 3 ಹಂತಗಳಲ್ಲಿ ವಿಂಗಡಿಸಲಾಗಿದೆ:

ಹಂತ ೧: ಪ್ರಿಲಿಮಿನರಿ ಪರೀಕ್ಷೆ 

ಹಂತ ೨: ಮುಖ್ಯ ಪರೀಕ್ಷೆ 

ಹಂತ ೩: ಸ್ಥಳೀಯ ಭಾಷಾ ಪರೀಕ್ಷೆ

೫. ಪರೀಕ್ಷಾ ಮಾದರಿ 

ಅ) ಪ್ರಿಲಿಮಿನರಿ ಪರೀಕ್ಷಾ ಮಾದರಿ 

ಪ್ರಿಲಿಮ್ಸ್ ಪರೀಕ್ಷೆಯು ಆನ್‌ಲೈನ್ ಮೂಲಕ ನಡೆಯಲಿದ್ದು, ವಸ್ತುನಿಷ್ಠ ಮಾದರಿಯ  ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಟ್ಟು 100 ಅಂಕಗಳಿಗೆ 1 ಗಂಟೆಯ ಪರೀಕ್ಷೆ ಇದಾಗಿರುತ್ತದೆ.

ಋಣಾತ್ಮಕ ಮೌಲ್ಯಮಾಪನ : ಪ್ರತಿಯೊಂದು ತಪ್ಪು ಉತ್ತರಕ್ಕೆ 1/4 (0.25) ಅಂಕಗಳನ್ನು ಕಳೆಯಲಾಗುತ್ತದೆ.

ಪ್ರಿಲಿಮ್ಸ್ ಪರೀಕ್ಷೆಯು ಕೇವಲ ಮುಖ್ಯ ಪರೀಕ್ಷೆಗೆ  ಅರ್ಹತೆ ಪಡೆಯಲು ಮಾತ್ರ. ಇದರ ಅಂಕಗಳನ್ನು ಅಂತಿಮ ಮೆರಿಟ್‌ ಪಟ್ಟಿಗೆ ಪರಿಗಣಿಸುವುದಿಲ್ಲ.

ಆ) ಮುಖ್ಯ ಪರೀಕ್ಷಾ ಮಾದರಿ 

ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಮುಖ್ಯ ಪರೀಕ್ಷೆಯು 200 ಅಂಕಗಳಿಗೆ 2 ಗಂಟೆ 40 ನಿಮಿಷಗಳ ಕಾಲ ನಡೆಯುತ್ತದೆ.

Negative Marking: ಮುಖ್ಯ ಪರೀಕ್ಷೆಯಲ್ಲೂ ಸಹ 1/4 ನೇ ಭಾಗದಷ್ಟು ಅಂಕಗಳನ್ನು ತಪ್ಪು ಉತ್ತರಗಳಿಗೆ ಕಳೆಯಲಾಗುತ್ತದೆ.

ಅಂತಿಮ ಆಯ್ಕೆಯನ್ನು ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆಯೇ ನಿರ್ಧರಿಸಲಾಗುತ್ತದೆ.

ಇ) ಸ್ಥಳೀಯ ಭಾಷಾ ಪರೀಕ್ಷೆ 

ನೀವು ಕರ್ನಾಟಕ ರಾಜ್ಯದಿಂದ ಅರ್ಜಿ ಸಲ್ಲಿಸಿದ್ದು, 10ನೇ ತರಗತಿ ಅಥವಾ 12ನೇ ತರಗತಿಯಲ್ಲಿ ‘ಕನ್ನಡ’ ವನ್ನು ಒಂದು ಭಾಷೆಯಾಗಿ ವ್ಯಾಸಂಗ ಮಾಡಿದ್ದರೆ ನಿಮಗೆ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ (ಅಂಕಪಟ್ಟಿ ಒದಗಿಸಬೇಕು).

ಒಂದು ವೇಳೆ ಶಾಲೆಯಲ್ಲಿ ಕನ್ನಡ ವಿಷಯ ಓದದಿಿದ್ದರೆ, ಮುಖ್ಯ ಪರೀಕ್ಷೆಯ ನಂತರ ಬ್ಯಾಂಕ್ ನಡೆಸುವ ‘ಸ್ಥಳೀಯ ಭಾಷಾ ಪರೀಕ್ಷೆ’ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.

೬. ಪರೀಕ್ಷಾ ಪಠ್ಯಕ್ರಮ 

ಸರಿಯಾದ ಯೋಜನೆಯೊಂದಿಗೆ ಸಿದ್ಧತೆ ನಡೆಸಲು ಪಠ್ಯಕ್ರಮದ ಅರಿವು ಅತ್ಯಗತ್ಯ.

೧. Reasoning Ability (ತಾರ್ಕಿಕ ಕ್ಷಮತೆ):

Puzzles & Seating Arrangement (ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಒಗಟುಗಳು)

Syllogism (ಸೈಲೋಜಿಸಂ)

Blood Relations (ರಕ್ತಸಂಬಂಧಗಳು)

Direction Sense (ದಿಕ್ಕುಗಳ ಜ್ಞಾನ)

Coding-Decoding (ಕೋಡಿಂಗ್ ಮತ್ತು ಡಿಕೋಡಿಂಗ್)

Inequalities (ಅಸಮಾನತೆಗಳು)

Input-Output & Data Sufficiency

೨. Numerical Ability / Quantitative Aptitude (ಸಂಖ್ಯಾತ್ಮಕ ಸಾಮರ್ಥ್ಯ):

Simplification / Approximation (ಸರಳೀಕರಣ)

Number Series (ಸಂಖ್ಯಾ ಸರಣಿ)

Data Interpretation – DI (ದತ್ತಾಂಶ ವಿಶ್ಲೇಷಣೆ: Bar Graph, Pie Chart, Line Graph)

Quadratic Equations (ವರ್ಗ ಸಮೀಕರಣಗಳು)

Arithmetic Topics: ಶೇಕಡಾವಾರು (Percentage), ಲಾಭ ಮತ್ತು ನಷ್ಟ (Profit & Loss), ಸರಾಸರಿ (Average), ಅನುಪಾತ (Ratio & Proportion), ಸರಳ ಮತ್ತು ಚಕ್ರ ಬಡ್ಡಿ (Simple & Compound Interest), ಸಮಯ ಮತ್ತು ಕೆಲಸ (Time & Work), ವೇಗ ಮತ್ತು ದೂರ (Speed, Time & Distance).

೩. General / Financial Awareness (ಸಾಮಾನ್ಯ ಮತ್ತು ಹಣಕಾಸು ಜಾಗೃತಿ):

ಪ್ರಚಲಿತ ಘಟನೆಗಳು (Current Affairs – ಕಳೆದ 6 ತಿಂಗಳ ಸುದ್ದಿ)

ಬ್ಯಾಂಕಿಂಗ್ ಜಾಗೃತಿ (Banking Terms, RBI Rules, Monetary Policy)

ಭಾರತೀಯ ಆರ್ಥಿಕತೆ ಮತ್ತು ಬಜೆಟ್ (Indian Economy & Union Budget)

ಕೇಂದ್ರ ಸರ್ಕಾರದ ಯೋಜನೆಗಳು (Government Schemes)

ಮುಖ್ಯ ಕಚೇರಿಗಳು, ರಾಷ್ಟ್ರೀಯ ಉದ್ಯಾನವನಗಳು, ಪ್ರಶಸ್ತಿಗಳು ಮತ್ತು ಕ್ರೀಡೆಗಳು.

೪. English Language (ಇಂಗ್ಲಿಷ್ ಭಾಷೆ):

Reading Comprehension (ಗದ್ಯ ಅರ್ಥಗ್ರಹಣ)

Cloze Test

Error Spotting (ತಪ್ಪುಗಳನ್ನು ಗುರುತಿಸುವುದು)

Para Jumbles (ವಾಕ್ಯಗಳ ಸರಿಯಾದ ಜೋಡಣೆ)

Sentence Improvement & Vocabulary (ಪದಕೋಶ)

೭. ಅರ್ಜಿ ಶುಲ್ಕದ ವಿವರ 

ಸಾಮಾನ್ಯ (General) / OBC / EWS ಅಭ್ಯರ್ಥಿಗಳಿಗೆ: ₹750/-

SC / ST / PwBD / ESM (ಮಾಜಿ ಸೈನಿಕ) ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ (ವಿಲೇವಾರಿ ಶುಲ್ಕವೂ ಇರುವುದಿಲ್ಲ)

ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ (UPI) ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬೇಕು.

೮. ಪ್ರಮುಖ ದಿನಾಂಕಗಳು 

ಅಧಿಕೃತ ಅಧಿಸೂಚನೆ ಪ್ರಕಟಣೆ – 10 ಆಗಸ್ಟ್ 2026

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ – 11 ಆಗಸ್ಟ್ 2026

ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನ – 31 ಆಗಸ್ಟ್ 2026

ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ – ಸೆಪ್ಟೆಂಬರ್ 2026

ಪ್ರಿಲಿಮಿನರಿ ಪರೀಕ್ಷಾ ದಿನಾಂಕ – ಸೆಪ್ಟೆಂಬರ್ / ಅಕ್ಟೋಬರ್ 2026

ಮುಖ್ಯ ಪರೀಕ್ಷಾ ದಿನಾಂಕ – ನವೆಂಬರ್ 2026

೯. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 

ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳಾಗದಂತೆ ಕೆಳಗಿನ ಹಂತಗಳನ್ನು ಅನುಸರಿಸಿ:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಪೋರ್ಟಲ್ https://ibpsreg.ibps.in/sbijajul26/ ಗೆ ಭೇಟಿ ನೀಡಿ.

ನೋಂದಣಿ (Registration):

‘Join SBI’ ವಿಭಾಗದಲ್ಲಿ “Recruitment of Junior Associates 2026” ಲಿಂಕ್ ಆಯ್ಕೆ ಮಾಡಿ. “Click here for New Registration” ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ. ನೋಂದಣಿ ಸಂಖ್ಯೆ (Registration No) ಮತ್ತು ಪಾಸ್‌ವರ್ಡ್ ನಿಮ್ಮ ಮೊಬೈಲ್‌ಗೆ ಬರಲಿದೆ.

ಛಾಯಾಚಿತ್ರ ಮತ್ತು ಸಹಿ ಅಪ್‌ಲೋಡ್ :

ನಿಗದಿತ ಅಳತೆಯಲ್ಲಿ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ, ಸಹಿ, ಎಡಗೈ ಹೆಬ್ಬೆರಳಿನ ಗುರುತು  ಮತ್ತು ಕೈಬರಹದ ಘೋಷಣೆಯನ್ನು  ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ವೈಯಕ್ತಿಕ ವಿವರಗಳ ಭರ್ತಿ:

ನಿಮ್ಮ ಶೈಕ್ಷಣಿಕ ಮಾಹಿತಿ, ಜನ್ಮ ದಿನಾಂಕ, ವರ್ಗ , ವಿಳಾಸ ಮತ್ತು ಪರೀಕ್ಷಾ ಕೇಂದ್ರದ ಆಯ್ಕೆಯನ್ನು ಸರಿಯಾಗಿ ಭರ್ತಿ ಮಾಡಿ.

ಪೂರ್ವವೀಕ್ಷಣೆ (Preview):

ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ‘Preview’ ವಿಭಾಗದಲ್ಲಿ ಒಮ್ಮೆ ಪರಿಶೀಲಿಸಿಕೊಳ್ಳಿ.

ಅರ್ಜಿ ಶುಲ್ಕ ಪಾವತಿ:

ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್‌ಲೈನ್ (UPI / Net Banking / Card) ಮೂಲಕ ಪಾವತಿಸಿ.

ಅರ್ಜಿ ಸಲ್ಲಿಕೆ ಮತ್ತು ಪ್ರಿಂಟ್‌ಔಟ್:

‘Final Submit’ ಬಟನ್ ಕ್ಲಿಕ್ ಮಾಡಿ. ಪೂರ್ಣಗೊಂಡ ಅರ್ಜಿಯ ಪಿಡಿಎಫ್ ಪ್ರತಿ ಮತ್ತು ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

 ಅಧಿಕೃತ ಅಧಿಸೂಚನೆ  JA_2026_Detailed_Advt_Eng
 ಅಪ್ಲಿಕೇಶನ್ ಲಿಂಕ್   https://ibpsreg.ibps.in/sbijajul26/

 

೧೦. ಪರೀಕ್ಷಾ ತಯಾರಿಗೆ ಉಪಯುಕ್ತ ಸಲಹೆಗಳು 

ಪಠ್ಯಕ್ರಮವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಿ: ಪರೀಕ್ಷೆಗೆ ಸಿದ್ಧತೆ ಆರಂಭಿಸುವ ಮುನ್ನ ಪ್ರಿಲಿಮ್ಸ್ ಮತ್ತು ಮೇನ್ಸ್ ಪಠ್ಯಕ್ರಮವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ದೈನಂದಿನ ಅಣಕು ಪರೀಕ್ಷೆಗಳು : ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ  ಅತ್ಯಂತ ಮುಖ್ಯ. ನಿಯಮಿತವಾಗಿ ಆನ್‌ಲೈನ್ ಮಾಕ್ ಟೆಸ್ಟ್‌ಗಳನ್ನು ನೀಡಿ ನಿಮ್ಮ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಿಕೊಳ್ಳಿ.

ದಿನಪತ್ರಿಕೆ ಓದುವ ಅಭ್ಯಾಸ: ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಪ್ರಚಲಿತ ಘಟನೆಗಳಿಗಾಗಿ ಪ್ರತಿದಿನ ಇಂಗ್ಲಿಷ್ ಅಥವಾ ಕನ್ನಡ ದಿನಪತ್ರಿಕೆಗಳನ್ನು ಓದಿ.

ಗಣಿತ ಮತ್ತು ತಾರ್ಕಿಕತೆಗೆ ಆದ್ಯತೆ: ನಿತ್ಯವೂ ಶಾರ್ಟ್‌ಕಟ್ ಟ್ರಿಕ್ಸ್‌ಗಳನ್ನು ಅಭ್ಯಾಸ ಮಾಡುವುದರಿಂದ ಸಂಖ್ಯಾತ್ಮಕ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಬಹುದು.

ಎಸ್‌ಬಿಐ ಕ್ಲರ್ಕ್ ನೇಮಕಾತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರವಾದ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ಪದವೀಧರನಿಗೂ ಸಿಕ್ಕಿರುವ ಅತ್ಯುತ್ತಮ ಅವಕಾಶವಾಗಿದೆ. ಅಪಾರ ಸಂಖ್ಯೆಯ ಹುದ್ದೆಗಳು ಇರುವುದರಿಂದ ಸೂಕ್ತ ಸಿದ್ಧತೆ ನಡೆಸಿದರೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಲು ಸಾಧ್ಯ. ಕೊನೆಯ ದಿನಾಂಕದವರೆಗೆ ಕಾಯದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ತಮ್ಮ ತಯಾರಿಯನ್ನು ಆರಂಭಿಸಿ. ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೂಂದಿಗೆ ಹಂಚಿಕೊಳ್ಳಿ.

Leave a Comment